97. ಅಲ್ ಕದ್ರ್ (ನಿರ್ಣಾಯಕ)
ವಚನಗಳು – 5, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ನಾವು ಇದನ್ನು ಗೌರವಾನ್ವಿತ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು.
2. ಗೌರವಾನ್ವಿತ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು?
3. ಆ ಗೌರವಾನ್ವಿತ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.
4. ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ.
5. ಶಾಂತಿಯಾಗಿರುತ್ತದೆ – ಅದು, ಬೆಳಗಿನ ಉದಯದ ತನಕ.