99. ಅಝ್ಝಿಲ್ಝಾಲ್ (ಕಂಪನ)
ವಚನಗಳು – 8, ಮದೀನಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ಭೂಮಿಯು ಭೂಕಂಪದಿಂದ ಕಂಪಿಸುವಾಗ
2. ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ.
3. ಮತ್ತು ಮಾನವನು – ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ.
4. ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು.
5. ಏಕೆಂದರೆ, ಅದರ ಒಡೆಯನು (ಹಾಗೆ ಮಾಡಲು) ಅದಕ್ಕೆ ಆದೇಶಿಸಿರುವನು.
6. ಅಂದು ಜನರು ಗುಂಪು ಗುಂಪಾಗಿ ಹೊರ ಬರುವರು – ತಮ್ಮ ಕರ್ಮಗಳನ್ನು ಕಾಣಲಿಕ್ಕಾಗಿ.
7. ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು.
8. ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು.