102. ಅತ್ತಕಾಸುರ್ (ಅಧಿಕದ ಚಿಂತೆ)
ವಚನಗಳು – 8, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. (ಮಾನವರೇ.) ಹೆಚ್ಚೆಚ್ಚು ಗಳಿಸುವ ಚಿಂತೆಯು ನಿಮ್ಮನ್ನು ಮೈಮರೆಸಿದೆ.
2. ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ).
3. ಖಂಡಿತ ಇದು ಸರಿಯಲ್ಲ, ನಿಮಗೆ ಬೇಗನೇ ತಿಳಿಯಲಿದೆ.
4. ಮತ್ತೆ , ಖಂಡಿತ ಇದು ಸರಿಯಲ್ಲ. ನಿಮಗೆ ಬೇಗನೇ ತಿಳಿಯಲಿದೆ.
5. ಖಂಡಿತ ಇದು ಸರಿಯಲ್ಲ, ನಿಮಗೆ (ಈ ವಾಸ್ತವವು) ಜ್ಞಾನ ತುಂಬಿದ ನಂಬಿಕೆಯೊಂದಿಗೆ ತಿಳಿದಿದ್ದರೆ ಚೆನ್ನಾಗಿತ್ತು.
6. ಖಂಡಿತ ನೀವು ನರಕವನ್ನು ಕಾಣುವಿರಿ.
7. ಮತ್ತೆ, ನಂಬಿಕೆ ತುಂಬಿದ ಕಣ್ಣುಗಳಿಂದ ನೀವು ಅದನ್ನು ಖಂಡಿತ ಕಾಣುವಿರಿ.
8. ಕೊನೆಗೆ ಆ ದಿನ ನಿಮ್ಮೊಡನೆ, ನಿಮಗೆ ನೀಡಲಾಗಿದ್ದ ಕೊಡುಗೆಗಳ ಕುರಿತು ಪ್ರಶ್ನಿಸಲಾಗುವುದು.