107. ಅಲ್ ಮಾಊನ್ (ಸಣ್ಣ ನೆರವು)
ವಚನಗಳು – 7, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು?
2. ಅವನೇ, ಅನಾಥನನ್ನು ದೂರ ದಬ್ಬುವವನು.
3. ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು.
4. ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ;
5. ಅವರು, ತಮ್ಮ ನಮಾಝ್ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ.
6. ಅವರು ಡಂಬಾಚಾರ ಮಾಡುತ್ತಾರೆ
7. ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ.