101. Al Qariah

101. ಅಲ್ ಕ್ವಾರಿಅಃ (ಭಾರೀ ಆಘಾತ)

 ವಚನಗಳು – 11, ಮಕ್ಕ:

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಭಾರೀ ಆಘಾತ

2. ಏನದು, ಭಾರೀ ಆಘಾತ?

3. ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು?

4. ಅಂದು ಜನರು ಚದರಿದ ಹಾತೆಗಳಂತಾಗುವರು.

5. ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು.

6. ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ –

7. – ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು.

8. ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ –

9. – ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು.

10. ಅದೇನೆಂದು ನಿಮಗೇನು ಗೊತ್ತು?

11. ಅದು ಉರಿಯುವ ಬೆಂಕಿಯಾಗಿರುವುದು.

Quran in Kannada, Quran, Quran Kannada,