109. Al Kafirun

109. ಅಲ್ಕಾಫಿರೂನ್ (ಧಿಕ್ಕಾರಿಗಳು)

 ವಚನಗಳು – 6, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ದೂತರೇ,) ಹೇಳಿರಿ; ಧಿಕ್ಕಾರಿಗಳೇ,

2. ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ.

3. ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ.

4.ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ.

5. ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ.

6. ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ.

Quran in Kannada, Quran, Quran Kannada,