113. Al Falak

113. ಅಲ್ ಫಲಕ್(ಮುಂಜಾವು)

 ವಚನಗಳು – 5, ಮಕ್ಕಃ

ಅಲ್ಲಾಹನ ಹೆಸರಿಂದ -ಅವನು ಅಪಾರ ದಯಾಳು, ಕರುಣಾಮಯಿ.

1 ಹೇಳಿರಿ; ನಾನು, ಮುಂಜಾವಿನ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ –

2. ಅವನು ಸೃಷ್ಟಿಸಿರುವ ಎಲ್ಲ ಕೆಡುಕುಗಳಿಂದ (ಸುರಕ್ಷಿತನಾಗಿರಲು)

3. ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)

4. ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ

5. ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ).

Quran in Kannada, Quran, Quran Kannada,