114. An Nas

114. ಅನ್ನಾಸ್ (ಮಾನವರು)

ವಚನಗಳು – 6, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ.

2. ಅವನು (ಅಲ್ಲಾಹನು) ಮಾನವರ ದೊರೆ,

3. ಮಾನವರ ಆರಾಧ್ಯ.

 4. ಗೊಂದಲ ಹುಟ್ಟಿಸುವವನ (ಮತ್ತು) ಅವಿತುಕೊಂಡು ಆಕ್ರಮಿಸುವವನ (ಶೈತಾನನ)ಕೆಡುಕಿನಿಂದ (ರಕ್ಷಿಸಲು ಅಲ್ಲಾಹನಲ್ಲಿ ಕೋರುತ್ತೇನೆ).

5. ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ.

6. ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು.