92. Al Layl

92. ಅಲ್ಲೈಲ್ (ಇರುಳು)

ವಚನಗಳು – 21, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

1. ರಾತ್ರಿಯಾಣೆ – ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ.

2. ಹಗಲಿನಾಣೆ – ಅದು ಬೆಳಗಿದಾಗ.

3. ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ.

4. ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ.

5. ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು.

6. ಮತ್ತು ಒಳಿತನ್ನು ಸಮರ್ಥಿಸಿದವನು –

7. – ಅವನ ಪಾಲಿಗೆ ನಾವು ಸರಳವಾದ ಮಾರ್ಗದ ಸುಲಭ ಗೊಳಿಸುವೆವು.

8. ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು.

9. ಮತ್ತು ಒಳಿತನ್ನು ತಿರಸ್ಕರಿಸಿದವನು –

10. – ಅವನ ಪಾಲಿಗೆ ನಾವು ಕಠಿಣವಾದ ಮಾರ್ಗವನ್ನು ಸುಲಭಗೊಳಿಸುವೆವು.

11. ಅವನು ಉರುಳಿ ಬಿದ್ದಾಗ ಅವನ ಸಂಪತ್ತು ಅವನ ಯಾವ ಕೆಲಸಕ್ಕೂ ಬಾರದು.

12. ದಾರಿ ತೋರುವ ಹೊಣೆಯು ಖಂಡಿತ ನಮ್ಮ ಮೇಲಿದೆ.

13. ಪರಲೋಕವೂ ಇಹಲೋಕವೂ ಖಂಡಿತ ನಮಗೇ ಸೇರಿವೆ.

14. ನಾನು ನಿಮಗೆ ಧಗಧಗಿಸುವ ಅಗ್ನಿಯ ಕುರಿತು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ.

15. ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು –

16. – ಅವನು (ಸತ್ಯವನ್ನು) ತಿರಸ್ಕರಿಸಿದವನು ಹಾಗೂ ಅದರಿಂದ ಮುಖ ತಿರುಗಿಸಿ ಕೊಂಡವನು.

17. ಅಲ್ಲಾಹನು ಧರ್ಮ ನಿಷ್ಠನನ್ನು ಅದರಿಂದ ರಕ್ಷಿಸುವನು.

18. ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು (ಸನ್ಮಾರ್ಗದಲ್ಲಿ) ದಾನ ಮಾಡುತ್ತಾನೆ.

19. ಅವನು ಮರು ಪಾವತಿಸಬೇಕಾದ ಯಾವ ಋಣವೂ ಅವನ ಮೇಲಿಲ್ಲ –

20. ಅವನು (ಮಾಡುವ ದಾನವೆಲ್ಲಾ) ಕೇವಲ ತನ್ನ ಪರಮೋನ್ನತ ಒಡೆಯನನ್ನು (ಅಲ್ಲಾಹನನ್ನು) ಮೆಚ್ಚಿಸುವುದಕ್ಕಾಗಿ ಮಾತ್ರವಾಗಿರುತ್ತದೆ.

21. ಮತ್ತು ಅವನು ಬಹು ಬೇಗನೇ ಸಂತೃಪ್ತನಾಗುವನು. 

Quran in Kannada, Quran, Quran Kannada,