94. Ash Sharh

94. ಅಲ್ ಇನ್ಶಿರಾಹ್ (ವಿಸ್ತರಣೆ)

ವಚನಗಳು – 8, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ?

2. ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ?

3. ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು.

4. ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ?

5. ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ.

6. ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ.

7. ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ.

8. ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ.

Quran in Kannada, Quran, Quran Kannada,