97. Al Qadr

97. ಅಲ್ ಕದ್ರ್ (ನಿರ್ಣಾಯಕ)

ವಚನಗಳು – 5, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ನಾವು ಇದನ್ನು ಗೌರವಾನ್ವಿತ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು.

2. ಗೌರವಾನ್ವಿತ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು?

3. ಆ ಗೌರವಾನ್ವಿತ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.

4. ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ.

5. ಶಾಂತಿಯಾಗಿರುತ್ತದೆ – ಅದು, ಬೆಳಗಿನ ಉದಯದ ತನಕ.

Quran in Kannada, Quran, Quran Kannada,