95. ಅತ್ತೀನ್ (ಅಂಜೂರ)
ವಚನಗಳು – 8, ಮಕ್ಕಃ
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.
1. ಅಂಜೂರದಾಣೆ ಹಾಗೂ ಇಪ್ಪೆಯಾಣೆ.
2. ಸೀನೀನ್ (ಸಿನಾಯ್) ಪರ್ವತದಾಣೆ.
3. ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ.
4. ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು.
5. ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು.
6. ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ.
7. (ಮಾನವನೇ,) ಇಷ್ಟಾಗಿಯೂ ನೀನು ಪ್ರತಿಫಲದ ದಿನವನ್ನು ತಿರಸ್ಕರಿಸುವುದೇಕೆ?
8. ಎಲ್ಲ ತೀರ್ಪುಗಾರರಿಗಿಂತ ದೊಡ್ಡ ತೀರ್ಪುಗಾರನು ಅಲ್ಲಾಹನಲ್ಲವೇ?