105. Al Feel

105. ಅಲ್ ಫೀಲ್ (ಆನೆ)

ವಚನಗಳು – 5, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ನೀವು ಕಂಡಿಲ್ಲವೇ, ನಿಮ್ಮೊಡನೆಯನು ಆನೆಯವರಿಗೆ ಏನು ಮಾಡಿದನೆಂದು?

2. ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ?

3. ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು.

4. ಅವು ಅವರ ಮೇಲೆ ಹರಳು ಕಲ್ಲುಗಳನ್ನು ಎಸೆಯುತ್ತಿದ್ದವು.

5. ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು.