106. Quraysh

106. ಕುರೈಶ್ (ಕುರೈಶರು)

 ವಚನಗಳು – 4, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದ್ದಕ್ಕಾಗಿ,

2. ಅವರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದ ಪ್ರಯಾಣವನ್ನು ಪರಿಚಿತಗೊಳಿಸಿದ್ದಕ್ಕಾಗಿ.

3. ಅವರು ಈ ಭವನ (ಕಅ್ಬ:)ದ ಒಡೆಯ (ಅಲ್ಲಾಹ)ನನ್ನು ಪೂಜಿಸಲಿ.

4. ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ) ಅವರಿಗೆ ಶಾಂತಿ ಒದಗಿಸಿದವನು.