8. ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ.
9. ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು.
10. ಅದನ್ನು ಮಲಿನ ಗೊಳಿಸಿದವನು ಸೋತನು.
11. ಸಮೂದ್ ಜನಾಂಗದವರು ತಮ್ಮ ಅಹಂಕಾರದ ಕಾರಣ (ದೂತರನ್ನು) ತಿರಸ್ಕರಿಸಿದರು.
12. ಅವರಲ್ಲಿನ ತೀರಾ ದುಷ್ಟನೊಬ್ಬನು ಎದ್ದು ನಿಂತನು.
13. ಆಗ ಅಲ್ಲಾಹನ ದೂತರು – ಅಲ್ಲಾಹನ ಒಂಟೆ ಮತ್ತು ಅವರ ನೀರು ಕುಡಿಯುವ ಸರದಿಯ ಕುರಿತು ಎಚ್ಚರವಿರಲಿ – ಎಂದರು.
14. ಆದರೆ ಅವರು ಅವರ (ದೂತರ) ಮಾತನ್ನು (ಸುಳ್ಳೆಂದು) ತಿರಸ್ಕರಿಸಿದರು ಹಾಗೂ ಅದರ (ಒಂಟೆಯ) ಕಾಲುಗಳನ್ನು ಕಡಿದು ಬಿಟ್ಟರು. ಆಗ ಅವರ ಪಾಪದ ಕಾರಣ ಅವರ ಒಡೆಯನು ಅವರ ಮೇಲೊಂದು ಶಿಕ್ಷೆಯನ್ನು ಎರಗಿಸಿದನು ಹಾಗೂ ಅವರನ್ನು ನೆಲಸಮ ಗೊಳಿಸಿಬಿಟ್ಟನು.