01. Fatihah

1. ಅಲ್ ಫಾತಿಹಾ (ಆರಂಭ)

ವಚನಗಳು -7, ಮಕ್ಕಃ

1. ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

2. ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ.

3. ಅವನು ಅಪಾರ ದಯಾಳು, ಕರುಣಾಮಯಿ.

4. ಪ್ರತಿಫಲದ ದಿನದ ಮಾಲಕ.

5. (ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ.

6. ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು.

7. ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ.

Quran in Kannada, Quran, Quran Kannada,