93. Ad Duha

93. ಅಲ್ಲುಹಾ (ಬಿಸಿಲೇರುವ ಸಮಯ)

ವಚನಗಳು – 11, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಬಿಸಿಲೇರುವ ಸಮಯದಾಣೆ.

2. ಇರುಳು ಆವರಿಸುವಾಗಿನಾಣೆ.

 3. (ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ.

4. ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ.

5. ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು.

6. ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ?

7. ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ?

8. ಮತ್ತು ನೀವು ದಾರಿದ್ರದಲ್ಲಿದ್ದುದನ್ನು ಕಂಡು ಅವನು ನಿಮ್ಮನ್ನು ಸಂಪನ್ನ ರಾಗಿಸಲಿಲ್ಲವೇ?

9. ನೀವಿನ್ನು ಅನಾಥರನ್ನು ಗದರಿಸಬೇಡಿ.

10. ಮತ್ತು ಬೇಡುವವನನ್ನು ಜರೆಯಬೇಡಿ.

11. ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ) ವಿವರವಾಗಿ ತಿಳಿಸಿರಿ.

Quran in Kannada, Quran, Quran Kannada,